ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ ಆಯುಷ್ಯವೆಂಬ ರಾಶಿಯ ಅಳೆದು ತೀರದ ಮುನ್ನ ಶಿವನ ನೆನೆಯಿರೇ, ಶಿವನ ನೆನೆಯಿರೇ! ಈ ಜನ್ಮ ಬಳಿಕಿಲ್ಲ! ಚೆನ್ನಮಲ್ಲಿಕಾರ್ಜುನದೇವರ ದೇವ ಪಂಚಮಹಾಪಾತಕರೆಲ್ಲ ಮುಕ್ತಿವಡೆದರು! […]
ಕ್ರೀಯನರಿದವಂಗೆ ಗುರುವಿಲ್ಲ ಆಚಾರವನರಿದವಂಗೆ ಲಿಂಗವಿಲ್ಲ ಉತ್ಪತ್ತಿ ಸ್ಥಿತಿ ಲಯವನರಿದವಂಗೆ ಜಂಗಮವಿಲ್ಲ ಪರಬ್ರಹ್ಮವನರಿದವಂಗೆ ಸರ್ವೇಂದ್ರಿಯವಿಲ್ಲ ತನ್ನನರಿದವಂಗೆ ಹಿಂದೆ ಮುಂದೆ ಎಂಬುದೊಂದೂ ಇಲ್ಲವೆಂದ ಅಂಬಿಗರ ಚೌಡಯ್ಯ ವಚನದ ಅನ್ವಯಕ್ರಮ: […]
ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯ ಚಂದ್ರ ಕುಂದೆ ಕುಂದುವುದಯ್ಯ ಚಂದ್ರಂಗೆ ರಾಹು ಅಡ್ಡಬಂದಲ್ಲಿ ಅಂಬುಧಿ ಬೊಬ್ಬಿಟ್ಟಿತ್ತೇ ಅಯ್ಯ? ಅಂಬುಧಿಯ ಮುನಿ ಆಪೋಶನವ ಕೊಂಡಲ್ಲಿ ಚಂದ್ರಮನಡ್ಡ ಬಂದನೇ ಅಯ್ಯ? […]
ಗಾಳಿ ಬಿಟ್ಟಲ್ಲಿ ತೂರಿಕೊಳ್ಳಿರಯ್ಯಾ ಗಾಳಿ ನಿನ್ನಾಧೀನವಲ್ಲವಯ್ಯಾ ನಾಳೆ ತೂರಿಹೆನೆಂದರೆ ಇಲ್ಲವಯ್ಯಾ ಶಿವಶರಣ ಎಂಬುದೊಂದು ಗಾಳಿ ಬಿಟ್ಟಲ್ಲಿ ಬೇಗ ತೂರೆಂದ ಅಂಬಿಗರ ಚೌಡಯ್ಯ ಪದ-ಅರ್ಥ: ಗಾಳಿ ಬಿಟ್ಟಲ್ಲಿ-ಗಾಳಿ […]
ಅಂಗದ ಗುಣವನರತು ಲಿಂಗವನರಿಯಬೇಕೆಂಬರು ಅಂಗವರತ ಮತ್ತೆ ಲಿಂಗಕ್ಕೆ ಕುರುಹುಂಟೆ? ಅಂಗವೆ ಲಿಂಗ, ನಿರಂಗವೆ ಸಂಗ ಭಾವದ ಅಂಗವನರಿಯಬೇಕೆಂದನಂಬಿಗ ಚೌಡಯ್ಯ ವಚನದ ಅನ್ವಯಕ್ರಮ: ಅಂಗದ ಲಿಂಗವನ್ ಅರತು […]
ಅರಿಯದ ಗುರು, ಅರಿಯದ ಶಿಷ್ಯಂಗೆ ಅಂಧಕನ ಕೈಯ್ಯನಂಧಕ ಹಿಡಿದಡೆ ಮುಂದನಾರು ಕಾಬರು ಹೇಳೆಲೆ ಮರುಳೆ ತೊರೆಯಲದ್ದವನನೀಸಲರಿಯದವ ತೆಗೆವ ತೆರನಂತೆಂದನಂಬಿಗ ಚೌಡಯ್ಯ ವಚನದ ಅನ್ವಯಕ್ರಮ: ಅರಿಯದ […]
ಗುರುವೆಂಬೆನೆ ಹಲಬರ ಮಗ! ಲಿಂಗವೆಂಬೆನೆ ಕಲ್ಲುಕುಟಿಗರ ಮಗ! ಪ್ರಸಾದವೆಂಬೆನೆ ಒಕ್ಕಲಿಗರ ಮಗ! ಪಾದೋದಕವೆಂಬೆನೆ ದೇವೇಂದ್ರನ ಮಗ! ಈಸುವ ಹಿಡಿಯಲೂ ಇಲ್ಲ, ಬಿಡಲೂ ಇಲ್ಲ ತನ್ನೊಳಗ ನೋಡೆಂದನಂಬಿಗರ […]
ಎಣ್ಣೆ ಇದ್ದೂ ಎಳ್ಳು ನೆನೆಯದ ಭೇದವ, ಕಿಚ್ಚಿದ್ದೂ ಕಲ್ಲು ಸಿಡಿಯದ ಭೇದವ, ಕಾಮವಿದ್ದೂ ಕನ್ನೆಯನುಭವಿಸದ ಭೇದವ, ಪರವಿದ್ದು ಪ್ರಾಣನ ಪ್ರಕೃತಿಯ ಹಱಿಯದ ಭೇದವ ನರರೆತ್ತ ಬಲ್ಲರೈ […]
ಅನ್ನವ ನೀಡುವವರಿಂಗೆ ಧಾನ್ಯವೇ ಶಿವಲೋಕ ಅರ್ಥವ ಕೊಡುವವರಿಂಗೆ ಪಾಷಾಣವೇ ಶಿವಲೋಕ ಹೆಣ್ಣು-ಹೊನ್ನು-ಮಣ್ಣು ಮೂರನೂ ಕಣ್ಣಿನಲಿ ನೋಡಿ, ಕಿವಿಯಲಿ ಕೇಳಿ, ಕೈಯಲಿ ಮುಟ್ಟಿ ಮಾಡುವ ಭಕ್ತಿ ಸಣ್ಣವರ […]
ಅಱಿಯದವರೊಡನೆ ಸಂಗವ ಮಾಡಿದರೆ ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ! ಬಲ್ಲವರೊಡನೆ ಸಂಗವ ಮಾಡಿದರೆ ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗ ಕರ್ಪುರಗಿರಿಯ […]