ಮರವಿದ್ದು ಫಲವೇನು? ನೆಳಲಿಲ್ಲದನ್ನಕ! ಧನವಿದ್ದು ಫಲವೇನು? ದಯವಿಲ್ಲದನ್ನಕ! ಹಸುವಿದ್ದು ಫಲವೇನು? ಹಯನಿಲ್ಲದನ್ನಕ! ರೂಪಿದ್ದು ಫಲವೇನು? ಗುಣವಿಲ್ಲದನ್ನಕ! ಅಗಲಿದ್ದು ಫಲವೇನು? ಬಾನವಿಲ್ಲದನ್ನಕ! ನಾನಿದ್ದು ಫಲವೇನು? ನಿಮ್ಮ ಜ್ಞಾನವಿಲ್ಲದನ್ನಕ! […]
ಹಾವಾಡಿಗನು ಮೂಕೊರತಿಯು ತನ್ನ ಮಗನ ಮದುವೆಗೆ ಶಕುನವ ನೋಡ ಹೋಹಾಗ, ಇದಿರಲೊಬ್ಬ ಮೂಕೊರತಿ ಹಾವಾಡಿಗನ ಕಂಡು ಶಕುನ ಹೊಲ್ಲೆಂಬ ಚದುರನ ನೋಡಾ! ತನ್ನ ಸತಿ ಮೂಕೊರತಿ, […]
ಬಂಜೆ ಬೇನೆಯನಱಿವಳೆ? ಮಲತಾಯಿ ಮುದ್ದ ಬಲ್ಲಳೆ? ನೊಂದ ನೋವ ನೋಯದವರೆತ್ತ ಬಲ್ಲರು? ಚೆನ್ನಮಲ್ಲಿಕಾರ್ಜುನನಿಱಿದಲಗು ಒಡಲಲ್ಲಿ ಮುರಿದು ಹೊರಳುವೆನ್ನಳಲನು ನೀವೆತ್ತ ಬಲ್ಲಿರೇ, ಎಲೆ ತಾಯಿಗಳಿರಾ! -ಅಕ್ಕಮಹಾದೇವಿ […]